RAMESH P(38) |
Profession : Asst. Manager
Education : DEEE
Passion : Quotes Writing
Instagram ID : @rameshtaarika
ಮೊದಲಿನಿಂದಲೂ ಕವಿತೆಗಳನ್ನು ಓದುತ್ತಿದ್ದೆ ಆದರೆ ಬರೆಯಲು ಎಷ್ಟೇ ಪ್ರಯತ್ನಪಟ್ಟರೂ ಆಗುತ್ತಿರಲಿಲ್ಲ.
ನಾನು ಬರವಣಿಗೆಯನ್ನು ಪ್ರಾರಂಭಿಸಿದ್ದೇ ನಾನು ತುಂಬಾ ದುಃಖದ ಮಡುವಿನಲ್ಲಿದಾಗ...
ಕವಿತೆ ಬರೆಯುವುದನ್ನು ನಾನು ಬರೀ ಬರವಣಿಗೆಯಾಗಿ ಸ್ವೀಕರಿಸಿಲ್ಲ, ಇದರಲ್ಲಿ ಸಂತೋಷ, ದುಃಖ, ನೋವು, ನಲಿವು, ಭಾವನೆ, ಪ್ರೀತಿ, ನನ್ನ ಮನದಾಳದ ಮಾತು ಅಡಗಿದೆ.
ನಿಜ ಜೀವನದಲ್ಲಿ ನಡೆಯುವಂತಹ ಸನ್ನಿವೇಶಗಳನ್ನೇ ಉದಾಹರಣೆಯಾಗಿ ತೆಗೆದುಕೊಂಡು ಬರವಣಿಗೆಯ ರೂಪದಲ್ಲಿ ವ್ಯಕ್ತಪಡಿಸುತ್ತಿದ್ದೇನೆ.
ಮೊದಮೊದಲು ನಾನು ಬರೆಯಲು ಪ್ರಾರಂಭಿಸಿದಾಗ ಹೇಗೆ ಬರೆಯುವುದು ಎಂದು ತಿಳಿಯದೆ ತುಂಬಾ "ಕಷ್ಟಪಟ್ಟು" ಬರೆಯುತ್ತಿದ್ದೆ, ಪದ ಜೋಡಣೆಯಲ್ಲಿ ಅಥವಾ ವಾಕ್ಯ ರಚನೆಯಲ್ಲಿ ತುಂಬ ತಪ್ಪುಗಳಾಗುತ್ತಿದ್ದವು ಅದರಿಂದ ಹೊರಬರಲು ನನ್ನ ಸ್ನೇಹಿತರು ಮತ್ತು ಹಿತೈಷಿಗಳು ತುಂಬಾ ಬೆಂಬಲ ನೀಡಿದರು. ಆದರೆ, ಇಂದು ಇಷ್ಟಪಟ್ಟು ತುಂಬಾ "ಸುಲಭವಾಗಿ" ಬರೆಯುತ್ತೇನೆ.
ಇದರ ಮಧ್ಯೆ ಸ್ವಲ್ಪ ಜನ ನನ್ನ ಕಾಲೆಳೆದದ್ದು ಉಂಟು ಅದನ್ನೆಲ್ಲ ಲೆಕ್ಕಿಸದೆ ನಾನು ಮುಂದುವರೆದು 200+ ಅಧಿಕ ಕವಿತೆಗಳನ್ನು ಬರೆದು ಮುಂದೆ ಸಾಗುತ್ತಿದ್ದೇನೆ 😊.
Regards,
Ramesh P
No comments:
Post a Comment